Friday, November 2, 2018

ಕುಟುಂಬ ರಾಜಕೀಯದಿಂದ ಪ್ರಜಾಪ್ರಭುತ್ವ ಉಳಿಸಿ


ಭಾರತ ದೇಶದಲ್ಲಿ ಒಂದಿಲ್ಲಾ ಒಂದು ಸಮಸ್ಯೆಯಿಂದ ಸಾಮಾನ್ಯ ಜನ ನರಳುತ್ತಿದ್ದಾರೆ. ವೇದಗಳ ಕಾಲದಲ್ಲಿ ಜಾತಿ ಪದ್ಧತಿ ಹುಟ್ಟಿ ನಂತರ ಬೆಳೆದು ಮಾನವ ಕುಲವನ್ನು ಹಿಂಸಿಸಿ ನರಕದರ್ಶನ ಮಾಡಿಸಿತ್ತು. ಅದರ ಮಧ್ಯ ನಮ್ಮ ನಮ್ಮ ಒಳ ಜಗಳದಿಂದ ವಿದೇಶ ದಾಳಿ.ನಂತರ ಬ್ರಿಟೀಷರು 300 ವರ್ಷಗಳ ಕಾಲ ಆಳ್ವಿಕೆ ಹಿಂಗೇ ಒಂದಿಲ್ಲಾ ಒಂದು ಸಮಸ್ಯೆಯನ್ನು ನಾವೇ ಸೃಷ್ಟಿ ಮಾಡಿಕೊಂಡು ಅದರಿಂದ ನಂತರದ ದಿನಗಳಲ್ಲಿ ನರಕ ಯಾತನೆ ಅನುಭವಿಸಿದ್ದೇವೆ. ಭಾರತಕ್ಕೆ ಸ್ವಾತಂತ್ರ ಬಂದು 70 ವರ್ಷ ಗತಿಸಿದರೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಸ್ವಾತಂತ್ರ್ಯ ನಂತರದ ದಿನಗಳಿಂದಲ್ಲೂ ದೇಶದ ರಾಜಕೀಯ ವ್ಯವಸ್ಥೆ ಕೇಲವೆ ಕುಟುಂಬಗಳ ಹಿಡಿತಕ್ಕೆ ಸಿಲುಕಿದೆ ಇದರಿಂದ ಭವಿಷ್ಯದಲ್ಲಿ ದೊಡ್ಡ ಬೆಲೆ ನಾವೇ ತೆರಬೇಕಾಗುತ್ತದೆ. ಈಗಾಗಲ್ಲೇ ನೋಡಿದ್ದೇವೆ ಕುಟುಂಬ ರಾಜಕಾರಣವು ನಾವೇ ಸೃಷ್ಟಿಸಿ ಅದರಲ್ಲಿ ನಾವೇ ನರಳ ಬೇಕಾಗುತ್ತದೆ. ಕುಟುಂಬ ರಾಜಕಾರಣವನ್ನು ವಿರೋದಿಸೋಣ..... ಬಲಿಷ್ಠ ಭಾರತ ಕಟ್ಟೋಣ.
ಅಭಿಯಾನದ ಉದ್ದೇಶಗಳು
1) ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಅಥವಾ ಪರ ಅಲ್ಲ.
2) ಪಕ್ಷದಲ್ಲಿ ಕುಟುಂಬ ವ್ಯವಸ್ಥೆ ಇರಬಹುದು ಆದರೆ ಅಧಿಕಾರದಲ್ಲಿ ಬೇಡ. ಏಕೆಂದರೆ ಪಕ್ಷ ಪಕ್ಷದ ರೂಪರೇಷಗಳು ಪಕ್ಷಗಳ ಕಟ್ಟಿದವರಿಗೆ ಬಿಟ್ಟಿದ್ದು ಆದರೆ ಅಧಿಕಾರ ಇದು ಜನರು ಕೊಡುವ ಸೇವಾ ಅಸ್ತ್ರ.
3) ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೆ ಒಂದೇ ಕುಟುಂಬದ ಸದಸ್ಯರು ಸ್ಪರ್ದಿಸುವುದನ್ನು ವಿರೋದಿಸಿ ಜನ ಜಾಗೃತಿ ಮೂಡಿಸುವುದು.
4) ಒಂದೇ ಕುಟುಂಬ ಅಂದರೆ ಒಂದೇ ಮನೆಯಲ್ಲಿ ಒಟ್ಟಾಗಿ ಸಹ ಬಾಳ್ವೆ ನಡೆಸುವ ಅಣ್ಣ-ತಮ್ಮ, ತಂದೆ-ಮಗ ಅಥವಾ ಮಗಳು, ಅಕ್ಕ-ತಂಗಿ, ಗಂಡ- ಹೆಂಡತಿ ( ಭಾರತೀಯ ಕಾನೂನು ರೀತ್ಯ ಮತ್ತು ಭಾರತೀಯ ಸಂಪ್ರದಾಯ ಪ್ರಕಾರ ಒಂದೇ ಕುಟುಂಬದ ಸದಸ್ಯರು) ಇಂತಹ ಸಂಬಂಧಗಳು ಯಾವುದೇ ಚುನಾವಣೆಯಲ್ಲಿ ಒಬ್ಬರಿಗೆ ಮಾತ್ರ ಅವಕಾಶ.
5) ಕುಟುಂಬ ರಾಜಕಾರಣವನ್ನು ಮಾಡುವವರನ್ನು ಮಾತ್ರ ವಿರೋಧಿಸಬೇಕು.
6) ಒಬ್ಬರ ನಂತರ ಅಂದರೆ ರಾಜಕೀಯ ನಿವೃತ್ತಿಯ ನಂತರ ಅದೇ ಕುಟುಂಬದ ಬೇರೆ ಒಬ್ಬ ಸದಸ್ಯರು ರಾಜಕೀಯಕ್ಕೆ ಬರಬಹುದು.

ಏಕೆ ಅಭಿಯಾನ....
1) ಸಮಾನತೆ, ಅದೇ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಹೋಸ ಮುಖ, ಹೊಸ ದೃಷ್ಟಿಕೋನದ ಯುವ ಜನತೆಗೆ ಅವಕಾಶ ಕಲ್ಪಿಸುವುದು.
2)ದೇಶದ ಅಭಿವೃದ್ಧಿ
3) ಭ್ರಷ್ಠಾಚಾರ ನಿರ್ಮೂಲನೆ
4) ರಾಜಕೀಯನ್ನು ಸೇವಾ ಕ್ಷೇತ್ರವಾಗಿಸುವುದು.
5) ಕುಟುಂಬ ರಾಜಕಾರಣದಿಂದ ಭ್ರಷ್ಠಾಚಾರ ಆಡಳಿತ ಯಂತ್ರದ ನಿಧಾನಗತಿಯನ್ನು ಬದಲಾಗಿಸಲು
6) ಬದಲಾವಣೆಗಾಗಿ, ಏಕತೆ, ಐಕ್ಯತೆ, ಸಮಾನತೆಯ ದೇಶ ಕಟ್ಟಲು
7) ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಲು.

ದಯವಿಟ್ಟು ಬದಲಾವಣೆಗಾಗಿ ಬರೆಯಿರಿ. ನಿಮ್ಮ ಸಲಹೆ ಸೂಚನೆಗೆ ಸದಾ ಸ್ವಾಗತ ತಮ್ಮ ವಿಚಾರಗಳನ್ನು savedemocracyfromfamily@gmail.com   or savedemocracyfromfamilypolitics@yahoo.com

 

ಅಥವಾ 9008245730 whatsApp ಮಾಡಿ.

No comments:

Post a Comment

ಕುಟುಂಬ ರಾಜಕೀಯದಿಂದ ಪ್ರಜಾಪ್ರಭುತ್ವ ಉಳಿಸಿ

ಭಾರತ ದೇಶದಲ್ಲಿ ಒಂದಿಲ್ಲಾ ಒಂದು ಸಮಸ್ಯೆಯಿಂದ ಸಾಮಾನ್ಯ ಜನ ನರಳುತ್ತಿದ್ದಾರೆ . ವೇದಗಳ ಕಾಲದಲ್ಲಿ ಜಾತಿ ಪದ್ಧತಿ ಹುಟ್ಟಿ ನಂತರ ಬೆಳೆದು ಮಾನವ ಕುಲವ...